- 1 ಬೆಳ್ಳಿಗೆ ಗಣಿಯೂ ಬಂಗಾರಕ್ಕೆ ಚೊಕ್ಕ ಮಾಡುವ ಸ್ಥಳವೂ ಉಂಟಲ್ಲಾ?
- 2 ಕಬ್ಬಿಣ ವನ್ನು ಭೂಮಿಯಿಂದ ತೆಗೆಯುತ್ತಾರೆ; ಕಲ್ಲನ್ನು ಕರಗಿಸಿ ತಾಮ್ರವನ್ನು ತೆಗೆಯುತ್ತಾರೆ.
- 3 ಕತ್ತಲೆಗೆ ಮೇರೆ ಇಡು ತ್ತಾರೆ. ಅಂಧಕಾರದಲ್ಲಿಯೂ ಮರಣದ ನೆರಳಿನ ಲ್ಲಿಯೂ ಇರುವ ಕಲ್ಲುಗಳನ್ನು ಕಟ್ಟಕಡೇ ವರೆಗೂ ಅವರು ಶೋಧಿಸುತ್ತಾರೆ.
- 4 ನಿವಾಸದಿಂದ ಪ್ರವಾಹವು ಹೊರ ಚಿಮ್ಮುತ್ತದೆ. ನೀರುಗಳು ಕಾಲಿಗೆ ತಪ್ಪಿಸಿಕೊಂಡು ಒಣಗಿಹೋಗಿ ಮನುಷ್ಯರಿಗೆ ದೂರವಾಗಿವೆ.
- 5 ಭೂಮಿ ಯಿಂದ ರೊಟ್ಟಿಯು ಬರುತ್ತದೆ; ಆದರೆ ಅದರ ಕೆಳಗಿ ನದು ಬೆಂಕಿ ಬಿದ್ದಂತೆ ಹಾಳಾಗಿರುವದು.
- 6 ಅದರ ಕಲ್ಲುಗಳು ನೀಲಮಣಿಗಳ ಸ್ಥಳವಾಗಿವೆ; ಬಂಗಾರದ ಧೂಳು ಅದಕ್ಕೆ ಉಂಟು.
- 7 ಆ ಹಾದಿಯನ್ನು ಪಕ್ಷಿ ತಿಳಿಯಲಿಲ್ಲ; ಹದ್ದಿನ ಕಣ್ಣು ಅದನ್ನು ದೃಷ್ಟಿಸಲಿಲ್ಲ;
- 8 ಸಿಂಹದ ಮರಿಗಳು ಅದರಲ್ಲಿ ನಡೆಯಲಿಲ್ಲ. ಉಗ್ರ ವಾದ ಸಿಂಹವು ಅದನ್ನು ದಾಟಲಿಲ್ಲ.
- 9 ಅವನು ಬಂಡೆಯ ಮೇಲೆ ಕೈ ಹಾಕುತ್ತಾನೆ; ಪರ್ವತಗಳನ್ನು ಬುಡದಿಂದ ಮಗುಚುತ್ತಾನೆ.
- 10 ಬಂಡೆಗಳಲ್ಲಿ ಮಾರ್ಗ ಗಳನ್ನು ಕೊರೆದುಬಿಡುತ್ತಾನೆ; ಅವನ ಕಣ್ಣು ಅಮೂಲ್ಯ ವಾದದ್ದನ್ನೆಲ್ಲಾ ನೋಡುತ್ತದೆ.
- 11 ಅವನು ಪ್ರವಾಹ ಗಳನ್ನು ದಡ ವಿಾರದಂತೆ ಕಟ್ಟಿ ಮರೆಯಾದದ್ದನ್ನು ಬೆಳಕಿಗೆ ತರುತ್ತಾನೆ.
- 12 ಆದರೆ ಜ್ಞಾನವು ಎಲ್ಲಿ ದೊರಕುವದು? ಗ್ರಹಿಕೆ ಇರುವ ಸ್ಥಳ ಎಲ್ಲಿ?
- 13 ಮನುಷ್ಯನು ಅದರ ಬೆಲೆಯನ್ನು ತಿಳಿದುಕೊಳ್ಳುವದಿಲ್ಲ; ಜೀವಿತರ ಭೂಮಿಯಲ್ಲಿ ಅದು ದೊರಕುವದಿಲ್ಲ.
- 14 ಅಗಾಧವು--ಅದು ನನ್ನಲ್ಲಿ ಇಲ್ಲ ಅನ್ನುತ್ತದೆ; ಸಮುದ್ರವು--ನನ್ನ ಬಳಿಯಲ್ಲಿ ಇಲ್ಲ ಅನ್ನು ತ್ತದೆ.
- 15 ಅಪರಂಜಿಯನ್ನು ಅದಕ್ಕೆ ಬದಲಾಗಿ ಕೊಡು ವದಿಲ್ಲ; ಅದರ ಕ್ರಯಕ್ಕಾಗಿ ಬೆಳ್ಳಿಯನ್ನು ತೂಗುವ ದಿಲ್ಲ.
- 16 ಅದನ್ನು ಓಫೀರಿನ ಬಂಗಾರಕ್ಕೂ ಅಮೂಲ್ಯ ವಾದ ಗೋಮೇಧಿಕಕ್ಕೂ ನೀಲಕ್ಕೂ ಬೆಲೆ ಕಟ್ಟುವ ದಿಲ್ಲ.
- 17 ಬಂಗಾರವೂ ಸ್ಫಟಿಕವೂ ಅದಕ್ಕೆ ಸಮನಾಗಿರು ವದಿಲ್ಲ; ಅಪರಂಜಿಯ ಆಭರಣಗಳು ಅದಕ್ಕೆ ಸಮವಲ್ಲ;
- 18 ಹವಳವನ್ನೂ ಮುತ್ತುಗಳನ್ನೂ ನೆನಪು ಮಾಡುವದಿಲ್ಲ; ಜ್ಞಾನದ ಸಂಪತ್ತು ಮಾಣಿಕ್ಯಗಳಿಗಿಂತ ಮೇಲಾದದ್ದು.
- 19 ಕೂಷಿನ ಪುಷ್ಯರಾಗ ಅದಕ್ಕೆ ಈಡಾಗಿರುವದಿಲ್ಲ; ಶುದ್ಧ ಬಂಗಾರಕ್ಕೆ ಅದನ್ನು ತೂಗಿಸುವದಿಲ್ಲ.
- 20 ಆದರೆ ಜ್ಞಾನವು ಎಲ್ಲಿಂದ ಬರುವದು? ಗ್ರಹಿಕೆಯ ಸ್ಥಳವು ಎಲ್ಲಿ?
- 21 ಎಲ್ಲಾ ಜೀವಿಗಳ ಕಣ್ಣು ಗಳಿಗೆ ಅದು ಮರೆಯಾಗಿದೆ; ಆಕಾಶದ ಪಕ್ಷಿಗಳಿಗೆ ಮರೆಯಾಗಿದೆ.
- 22 ನಾಶಸ್ಥಾನವೂ ಮರಣವೂ --ಅದರ ಸುದ್ದಿಯನ್ನು ನಮ್ಮ ಕಿವಿಗಳಿಂದ ಕೇಳಿದ್ದೇವೆ ಅನ್ನುತ್ತವೆ.
- 23 ದೇವರು ಅದರ ಮಾರ್ಗವನ್ನು ಗ್ರಹಿಸಿ ಕೊಂಡಿದ್ದಾನೆ; ಆತನೇ ಅದರ ಸ್ಥಳವನ್ನು ತಿಳಿದಿದ್ದಾನೆ.
- 24 ಗಾಳಿಗೂ ತೂಕವನ್ನು ನೇಮಿಸಿ ಆತನು ಭೂಮಿಯ ಕಟ್ಟಕಡೆಗೂ ದೃಷ್ಟಿಸಿ ಆಕಾಶದ ಕೆಳಗೆ ನೋಡುತ್ತಾನೆ.
- 25 ನೀರನ್ನು ಅಳತೆಯಿಂದ ಪರಿಮಾಣ ನೋಡಿದ್ದಾನೆ.
- 26 ಆತನು ಮಳೆಗೆ ಕಟ್ಟಳೆಯನ್ನೂ ಗುಡುಗಿನ ಮಿಂಚಿಗೆ ಮಾರ್ಗವನ್ನೂ ಮಾಡಿದಾಗ
- 27 ಆಗಲೇ ಅದನ್ನು ನೋಡಿ ಪ್ರಕಟಿಸಿದನು; ಆತನು ಅದನ್ನು ಸಿದ್ಧಮಾಡಿ ಹೌದು, ಪರಿಶೋಧಿಸಿದನು.
- 28 ಆತನು ಮನುಷ್ಯನಿಗೆ ಹೇಳಿದ್ದೇ ನಂದರೆ--ಇಗೋ, ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವದೇ ಗ್ರಹಿಕೆ.
Job 28
- Details
- Parent Category: Old Testament
- Category: Job
ಯೋಬನು ಅಧ್ಯಾಯ 28