- 1 ಇನ್ನೂ ಹೆಚ್ಚಾಗಿ ಎಲೀಹು ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ--
- 2 ಓ ಜ್ಞಾನಿಗಳೇ, ನನ್ನ ನುಡಿಗಳನ್ನು ಕೇಳಿರಿ; ತಿಳಿದವರೇ ನನಗೆ ಕಿವಿಗೊಡಿರಿ.
- 3 ಆಹಾರವನ್ನು ಬಾಯಿ ರುಚಿನೋಡುವಂತೆ, ಕಿವಿಯು ನುಡಿಗಳನ್ನು ಪರಿಶೋಧಿಸುತ್ತದೆ.
- 4 ನ್ಯಾಯವನ್ನು ನಾವು ಆದುಕೊಳ್ಳೋಣ; ಒಳ್ಳೇದೇನೆಂದು ನಮ್ಮೊಳಗೆ ನಾವೇ ತಿಳಿದುಕೊಳ್ಳೋಣ.
- 5 ಯೋಬನು--ನಾನು ನೀತಿವಂತನಾಗಿದ್ದೇನೆ, ದೇವರು ನನ್ನ ನ್ಯಾಯತೀ ರ್ಪನ್ನು ತೆಗೆದುಬಿಟ್ಟನು.
- 6 ನನ್ನ ನ್ಯಾಯಕ್ಕೆ ವಿರೋಧ ವಾಗಿ ನಾನು ಸುಳ್ಳಾಡಲೋ? ದ್ರೋಹವಿಲ್ಲದೆ ನನ್ನ ಗಾಯವು ಮಾಯದಂಥದ್ದೇ ಎಂದು ಹೇಳಿದ್ದನು.
- 7 ಯೋಬನಂತೆ ಹಾಸ್ಯವನ್ನು ನೀರಿನಂತೆ ಕುಡಿಯುವ ಪುರುಷನು ಯಾರು?
- 8 ಅವನು ಅಪರಾಧ ಮಾಡು ವವರ ಸಹವಾಸದಲ್ಲಿ ಹೋಗುತ್ತಾ, ದುಷ್ಟ ಜನರ ಸಂಗಡ ನಡೆದುಕೊಳ್ಳುತ್ತಾನೆ.
- 9 ಅವನು--ದೇವರ ಸಂಗಡ ಆನಂದಿಸುವದು ಮನುಷ್ಯನಿಗೆ ಉಪಯೋಗ ವಿಲ್ಲವೆಂದು ಹೇಳುತ್ತಾನೆ.
- 10 ಆದದರಿಂದ ತಿಳುವಳಿಕೆಯುಳ್ಳ ಜನರೇ, ನಾನು ಹೇಳುವದನ್ನು ಕೇಳಿರಿ, ದೇವರಿಗೆ ದುಷ್ಟತ್ವವೂ ಸರ್ವ ಶಕ್ತನಿಗೆ ಅನ್ಯಾಯವೂ ದೂರವಾಗಿರಲಿ.
- 11 ಮನುಷ್ಯನ ಕೆಲಸಕ್ಕೆ ಆತನು ಮುಯ್ಯಿಕೊಡುತ್ತಾನೆ, ಮನುಷ್ಯನ ಮಾರ್ಗದ ಪ್ರಕಾರ ಅವನು ಕಂಡುಕೊಳ್ಳುವಂತೆ ಮಾಡುತ್ತಾನೆ.
- 12 ಹೌದು, ನಿಶ್ಚಯವಾಗಿ ದೇವರು ದುಷ್ಟತ್ವವನ್ನು ಮಾಡುವದಿಲ್ಲ, ಇಲ್ಲವೆ ಸರ್ವಶಕ್ತನು ನ್ಯಾಯವನ್ನು ಡೊಂಕುಮಾಡುವದಿಲ್ಲ.
- 13 ಯಾವನು ಆತನಿಗೆ ಭೂಮಿಯ ಮೇಲೆ ಅಧಿಕಾರ ಕೊಟ್ಟಿದ್ದಾನೆ? ಇಲ್ಲವೆ ಆತನಿಗೆ ಸರ್ವಲೋಕವನ್ನು ಉಂಟುಮಾಡಿದ್ದಾನೆ?
- 14 ಆತನು ಮನುಷ್ಯನ ಮೇಲೆ ಮನಸ್ಸಿಟ್ಟು, ತನ್ನ ಆತ್ಮವನ್ನೂ ಶ್ವಾಸವನ್ನೂ ತನ್ನಲ್ಲಿ ಕೂಡಿಸಿದರೆ;
- 15 ಶರೀರಗಳೆಲ್ಲಾ ಒಟ್ಟಾಗಿ ನಾಶವಾಗು ವವು. ಮತ್ತು ಮನುಷ್ಯನು ದೂಳಿಗೆ ತಿರುಗುವನು.
- 16 ಗ್ರಹಿಕೆ ಇದ್ದರೆ ಇದನ್ನು ಕೇಳು; ನನ್ನ ನುಡಿಗಳ ಶಬ್ದಕ್ಕೆ ಕಿವಿಗೊಡು.
- 17 ನ್ಯಾಯವನ್ನು ಹಗೆಮಾಡುವ ವನು ಆಳುವನೋ? ಘನವಾದ ನೀತಿವಂತನನ್ನು ನೀನು ಖಂಡಿಸುತ್ತೀಯೋ?
- 18 ಅರಸನಿಗೆ ದುಷ್ಟನೆಂದೂ ಪ್ರಧಾನರಿಗೆ ಬಲಹೀನರೆಂದೂ ಹೇಳುವದುಂಟೋ?
- 19 ಆತನು ಪ್ರಧಾನರ ಮುಖದಾಕ್ಷಿಣ್ಯ ನೋಡು ವನೋ? ಧನಿಕನನ್ನು ಬಡವನಿಗಿಂತ ಹೆಚ್ಚೆಂದು ಲಕ್ಷಿ ಸುವನೋ? ಯಾಕಂದರೆ ಇಬ್ಬರೂ ಆತನ ಕೈ ಕೆಲಸ ವಾಗಿದ್ದಾರೆ.
- 20 ಅವರು ಕ್ಷಣಮಾತ್ರದಲ್ಲಿ ಸಾಯುತ್ತಾರೆ; ಮಧ್ಯ ರಾತ್ರಿಯಲ್ಲಿ ಜನರು ಕಳವಳಗೊಂಡು ಗತಿಸಿ ಹೋಗುತ್ತಾರೆ; ಪರಾಕ್ರಮಿಗಳು ಕೈ ಸೋಕದೆ ತೆಗೆಯಲ್ಪಡುತ್ತಾರೆ.
- 21 ಆತನ ಕಣ್ಣುಗಳು ಮನುಷ್ಯನ ಮಾರ್ಗಗಳ ಮೇಲೆ ಇರುತ್ತವೆ; ಅವನ ಹೋಗೋಣಗಳನ್ನೆಲ್ಲಾ ನೋಡುತ್ತಾನೆ.
- 22 ದುಷ್ಟತನ ಮಾಡುವವರು ಅಡಗಿ ಕೊಳ್ಳುವ ಹಾಗೆ ಕತ್ತಲೂ ಇಲ್ಲ, ಮರಣದ ನೆರಳೂ ಇಲ್ಲ.
- 23 ದೇವರ ಬಳಿಗೆ ನ್ಯಾಯಕ್ಕೆ ಬರುವ ಹಾಗೆ, ಮನುಷ್ಯನ ಮೇಲೆ ಆತನು ಹೆಚ್ಚು ಗಮನವಿಡುವದಿಲ್ಲ.
- 24 ಲೆಕ್ಕವಿಲ್ಲದ ಪರಾಕ್ರಮಿಗಳನ್ನು ಚೂರು ಚೂರು ಮಾಡಿ, ಮತ್ತೊಬ್ಬರನ್ನು ಅವರ ಸ್ಥಳದಲ್ಲಿ ನಿಲ್ಲಿಸು ತ್ತಾನೆ.
- 25 ಆದದರಿಂದ ಅವರು ನಾಶವಾಗುವಂತೆ ಆತನು ಅವರ ಕೆಲಸಗಳನ್ನು ತಿಳುಕೊಂಡು ರಾತ್ರಿಯಲ್ಲಿ ತಿರುಗಿಸಿ ಬಿಡುತ್ತಾನೆ.
- 26 ಅವರು ದುಷ್ಟರೆಂದು ಬೇರೆಯವರ ದೃಷ್ಟಿಯಲ್ಲಿ ಬಹಿರಂಗವಾಗಿ ಅವರನ್ನು ಹೊಡೆಯುತ್ತಾನೆ.
- 27 ಅವರು ಆತನಿಂದ ಹಿಂತಿರುಗಿ ಆತನ ಮಾರ್ಗಗಳನ್ನು ಲಕ್ಷಿಸಲಿಲ್ಲ.
- 28 ಹೀಗೆ ಬಡವರ ಕೂಗು ಆತನ ಬಳಿಗೆ ಬರುವಂತೆ ಮಾಡು ತ್ತಾರೆ, ಮತ್ತು ಆತನು ಬಾಧಿಸಲ್ಪಡುವವರ ಕೂಗನ್ನು ಕೇಳುತ್ತಾನೆ.
- 29 ಆತನು ಶಾಂತ ಮಾಡಿದರೆ ಯಾವನು ಕೇಡು ಮಾಡುವನು? ಆತನು ಮುಖವನ್ನು ಮರೆಮಾಡಿದರೆ ಆತನನ್ನು ದೃಷ್ಟಿಸುವವನು ಯಾರು? ಜನಾಂಗಕ್ಕೆ ವಿರೋಧವಾಗಿ ಮಾಡಿದರೂ ಸರಿ, ಮನುಷ್ಯ ಮಾತ್ರದ ವರಿಗಾದರೂ ಸರಿಯೇ.
- 30 ಹೀಗೆ ಜನರಿಗೆ ಉರು ಲಾಗದಂತೆ ಕಪಟಿಯು ಆಳುವದಿಲ್ಲ.
- 31 ನಿಶ್ಚಯವಾಗಿ ದೇವರಿಗೆ ಹೇಳತಕ್ಕದ್ದೇನಂದರೆ--ನಾನು ಶಿಕ್ಷೆಯನ್ನು ತಾಳಿದ್ದೇನೆ, ಇನ್ನು ಮೇಲೆ ಕೆಟ್ಟತನ ಮಾಡುವದಿಲ್ಲ.
- 32 ನಾನು ನೋಡಿದ್ದನ್ನು ನೀನು ನನಗೆ ಬೋಧಿಸು; ನಾನು ಅನ್ಯಾಯವನ್ನು ಮಾಡಿದ್ದರೆ, ಇನ್ನು ಮೇಲೆ ತಿರುಗಿ ಮಾಡೆನು.
- 33 ನಿನ್ನ ಮನಸ್ಸಿನ ಪ್ರಕಾರ ಇರ ಬೇಕೋ? ನೀನು ತಿರಸ್ಕರಿಸಿದರೂ ಆದು ಕೊಂಡರೂ ಆತನು ಪ್ರತಿಫಲ ಕೊಡುವನು ನಾನಲ್ಲ.
- 34 ತಿಳುವಳಿಕೆ ಯುಳ್ಳವರು ನನಗೆ ಹೇಳಲಿ, ಜ್ಞಾನಿಯು ನನ್ನ ಮಾತನ್ನು ಕೇಳಲಿ.
- 35 ಯೋಬನು ತಿಳುವಳಿಕೆಯಿಲ್ಲದೆ ಮಾತ ನಾಡಿದ್ದಾನೆ. ಅವನ ಮಾತುಗಳು ಬುದ್ಧಿಯುಳ್ಳವು ಗಳಲ್ಲ.
- 36 ದುಷ್ಟರಿಗಾಗಿ ಯೋಬನ ಪ್ರತ್ಯುತ್ತರ ಗಳಿಗೋಸ್ಕರ ಅವನು ಕಡೇ ವರೆಗೆ ಶೋಧಿಸಲ್ಪಡ ಬೇಕೆಂದು ನನ್ನ ಅಪೇಕ್ಷೆ.
- 37 ತನ್ನ ಪಾಪಕ್ಕೆ ದ್ರೋಹ ವನ್ನು ಕೂಡಿಸುತ್ತಾನೆ; ನಮ್ಮ ಮಧ್ಯದಲ್ಲಿ ಚಪ್ಪಾಳೆ ತಟ್ಟುತ್ತಾನೆ; ದೇವರಿಗೆ ವಿರೋಧವಾಗಿ ತನ್ನ ಮಾತು ಗಳನ್ನು ಅಧಿಕಮಾಡುತ್ತಾನೆ.
Job 34
- Details
- Parent Category: Old Testament
- Category: Job
ಯೋಬನು ಅಧ್ಯಾಯ 34