- 1 ಇದಲ್ಲದೆ ಎಲೀಹು ಮಾತನಾಡಿ ಹೇಳಿದ್ದೇನಂದರೆ--
- 2 ನನ್ನ ನೀತಿಯು ದೇವರ ನೀತಿ ಗಿಂತ ದೊಡ್ಡದು ಎಂದು ನೀನು ಹೇಳಿದ್ದು ಸರಿಯಾದ ದ್ದೆಂದು ನೀನು ನೆನಸುತ್ತೀಯೋ?
- 3 ನೀನು--ನನಗೆ ಏನು ಪ್ರಯೋಜನವಾಗುವದು? ನನ್ನ ಪಾಪವು ತೊಳೆ ಯಲ್ಪಟ್ಟರೆ ನನಗೆ ಲಾಭವೇನು ಎನ್ನುವಿ.
- 4 ನಾನು ನಿನಗೂ ನಿನ್ನ ಸಂಗಡ ಇರುವ ಸ್ನೇಹಿತರಿಗೂ ಉತ್ತರ ಕೊಡುತ್ತೇನೆ.
- 5 ಆಕಾಶಗಳನ್ನು ದೃಷ್ಟಿಸಿ ನೋಡು, ಮೇಘಗಳನ್ನು ದೃಷ್ಟಿಸು; ಅವು ನಿನಗಿಂತ ಎತ್ತರವಾಗಿವೆ.
- 6 ನೀನು ಪಾಪಮಾಡಿದರೆ ಆತನಿಗೆ ವಿರೋಧವಾಗಿ ಏನು ಮಾಡುವಿ? ನಿನ್ನ ದ್ರೋಹಗಳು ಹೆಚ್ಚಿದರೆ ಆತನಿಗೆ ಏನು ಮಾಡುವಿ?
- 7 ನೀನು ನೀತಿವಂತನಾಗಿ ದ್ದರೆ ಆತನಿಗೇನು ಕೊಡುವಿ? ಇಲ್ಲವೆ ಆತನು ನಿನ್ನ ಕೈಯಿಂದ ಏನು ತೆಗೆದುಕೊಳ್ಳುವನು?
- 8 ನಿನ್ನ ಹಾಗಿ ರುವ ಮನುಷ್ಯನಿಗೆ ನಿನ್ನ ದುಷ್ಟತ್ವವು ಕೇಡು ಮಾಡ ಬಹುದು. ಮನುಷ್ಯನ ಮಗನಿಗೆ ನಿನ್ನ ನೀತಿಯು ಲಾಭ ಮಾಡಬಹುದು.
- 9 ಬಹು ಬಲಾತ್ಕಾರದ ದೆಸೆಯಿಂದ ಬಲಾತ್ಕಾರ ಮಾಡಲ್ಪಟ್ಟವರು ಕೂಗುವಂತೆ ಅವರು ಮಾಡುತ್ತಾರೆ; ಪರಾಕ್ರಮಿಗಳ ತೋಳಿಗೋಸ್ಕರ ಮೊರೆಯಿಡುತ್ತಾರೆ.
- 10 ಆದರೆ ರಾತ್ರಿಯಲ್ಲಿ ಗೀತೆಗಳನ್ನು ಕೊಡುವ ನನ್ನ ನಿರ್ಮಾಣಿಕನಾದ ದೇವರು ಎಲ್ಲಿ ಎಂದು ಯಾರೂ ಹೇಳುವದಿಲ್ಲ.
- 11 ಆತನು ಭೂಮಿಯ ಮೃಗಗಳಿಗಿಂತ ನಮಗೆ ಹೆಚ್ಚು ಕಲಿಸಿ, ಆಕಾಶದ ಪಕ್ಷಿಗಳಿಗಿಂತ ನಮಗೆ ಅಧಿಕ ಜ್ಞಾನವನ್ನು ಕೊಡುತ್ತಾನೆ.
- 12 ಅಲ್ಲಿ ಅವರು ಕೆಟ್ಟವರ ಗರ್ವದ ನಿಮಿತ್ತ ಮೊರೆಯಿಡಲು ಉತ್ತರ ಕೊಡುವದಿಲ್ಲ.
- 13 ನಿಶ್ಚಯವಾಗಿ ವ್ಯರ್ಥವಾದ ದ್ದನ್ನು ದೇವರು ಕೇಳುವದಿಲ್ಲ. ಇಲ್ಲವೇ ಸರ್ವಶಕ್ತನು ಅದನ್ನು ಲಕ್ಷಿಸುವದಿಲ್ಲ.
- 14 ನೀನು ಅವನನ್ನು ದೃಷ್ಟಿಸುವ ದಿಲ್ಲವೆಂದು ನೀನು ಹೇಳಿದರೂ ನ್ಯಾಯತೀರ್ಪು ಅವನ ಮುಂದೆ ಇರುವದು; ಆದದರಿಂದ ನೀನು ಆತನಲ್ಲಿ ಭರವಸವಿಡು.
- 15 ಆದರೆ ಈಗ ಅದು ಹಾಗಲ್ಲದಿರುವದರಿಂದ ಆತನು ತನ್ನ ಕೋಪದಿಂದ ಏನೂ ವಿಚಾರಿಸದೆ ಇದ್ದಾನೆ; ಆದರೂ ಅವನು ದೊಡ್ಡ ಇಕ್ಕಟ್ಟಿನಲ್ಲಿ ಅದನ್ನು ತಿಳುಕೊಳ್ಳುವದಿಲ್ಲ.
- 16 ಆದದರಿಂದ ಯೋಬನು ವ್ಯರ್ಥವಾಗಿ ಬಾಯಿ ತೆರೆದು ತಿಳುವಳಿಕೆ ಇಲ್ಲದೆ ನುಡಿಗಳನ್ನು ಹೆಚ್ಚಿಸುತ್ತಾನೆ.
Job 35
- Details
- Parent Category: Old Testament
- Category: Job
ಯೋಬನು ಅಧ್ಯಾಯ 35