- 1 ಎಲೀಹು ಮುಂದುವರಿದು ಹೇಳಿದ್ದೇನಂದರೆ--
- 2 ನನಗೋಸ್ಕರ ಸ್ವಲ್ಪ ತಾಳಿ ಕೋ; ಆಗ ನಿನಗೆ ಪ್ರಕಟಮಾಡುವೆನು; ಯಾಕಂದರೆ ದೇವರ ಪರವಾಗಿ ಇನ್ನೂ ಮಾತುಗಳುಂಟು.
- 3 ನನ್ನ ತಿಳುವಳಿಕೆಯನ್ನು ದೂರದಿಂದ ತಕ್ಕೊಂಡು ಬರುವೆನು; ನನ್ನ ನಿರ್ಮಾಣಿಕನಿಗೆ ನೀತಿಯನ್ನು ಸಲ್ಲಿಸುವೆನು.
- 4 ನಿಜ ವಾಗಿ ನನ್ನ ಮಾತುಗಳು ಸುಳ್ಳಲ್ಲ; ತಿಳುವಳಿಕೆಯಲ್ಲಿ ಸಂಪೂರ್ಣನಾದವನು ನಿನ್ನ ಬಳಿಯಲ್ಲಿದ್ದಾನೆ.
- 5 ಇಗೋ, ದೇವರು ಬಲಿಷ್ಠನಾಗಿದ್ದು ಯಾರನ್ನೂ ತಿರಸ್ಕಾರ ಮಾಡುವದಿಲ್ಲ.
- 6 ಆತನು ಬಲದಲ್ಲಿಯೂ ಜ್ಞಾನದಲ್ಲಿಯೂ ಪರಾಕ್ರಮಿಯಾಗಿದ್ದಾನೆ. ದುಷ್ಟರ ಜೀವವನ್ನು ಆತನು ಕಾಪಾಡುವದಿಲ್ಲ. ಆದರೆ ಬಡವ ರಿಗೆ ಸರಿಯಾದದ್ದನ್ನು ಕೊಡುತ್ತಾನೆ.
- 7 ನೀತಿವಂತರಿಂದ ತನ್ನ ಕಣ್ಣುಗಳನ್ನು ತೊಲಗಿಸುವದಿಲ್ಲ. ಅವರು ಅರಸುಗಳ ಸಂಗಡ ಸಿಂಹಾಸನದಲ್ಲಿ ಇದ್ದಾರೆ. ಹೌದು, ಆತನು ಅವರನ್ನು, ಎಂದೆಂದಿಗೂ ಸ್ಥಿರಪಡಿಸುತ್ತಾನೆ. ಅವರು ಉನ್ನತಕ್ಕೇರಿಸಲ್ಪಟ್ಟಿದ್ದಾರೆ.
- 8 ಆದರೆ ಸಂಕೋಲೆ ಗಳಿಂದ ಕಟ್ಟಲ್ಪಟ್ಟಿದ್ದಾರೆ. ಬಾಧೆಯ ಬಂಧಗಳಿಂದ ಹಿಡಿಯಲ್ಪಟ್ಟಿದ್ದಾರೆ.
- 9 ಅವರ ಕೃತ್ಯವನ್ನೂ ದ್ರೋಹ ಗಳನ್ನೂ ಅವುಗಳಲ್ಲಿ ಬಲಗೊಂಡರೆಂದು ಅವರಿಗೆ ತೋರಿಸುತ್ತಾನೆ.
- 10 ಆತನು ಅವರ ಕಿವಿಯನ್ನು ಶಿಕ್ಷೆಗಾಗಿ ತೆರೆದು ದುಷ್ಟತನ ಬಿಟ್ಟು ತಿರುಗಿರೆಂದು ಅವರಿಗೆ ಆಜ್ಞಾಪಿಸುತ್ತಾನೆ.
- 11 ಅವರು ವಿಧೇಯರಾಗಿ ಸೇವಿಸಿದರೆ ತಮ್ಮ ದಿವಸಗಳನ್ನು ಅಭಿವೃದ್ಧಿಯಲ್ಲಿಯೂ ವರುಷ ಗಳನ್ನು ಸುಖದಲ್ಲಿಯೂ ಪೂರೈಸುವರು.
- 12 ಅವರು ವಿಧೇಯರಾಗದಿದ್ದರೆ ಕತ್ತಿಯಿಂದ ನಾಶವಾಗುವರು; ತಿಳಿಯದೆ ಸಾಯುವರು.
- 13 ಹೃದಯದಲ್ಲಿ ಕಪಟ ಇರು ವವರು ಕೋಪವನ್ನು ಕೂಡಿಸುತ್ತಾರೆ. ಆತನು ಅವರನ್ನು ಬಂಧಿಸಿದರೆ ಅವರು ಮೊರೆಯಿಡುವದಿಲ್ಲ.
- 14 ಯೌವ ನದಲ್ಲಿ ಅವರು ಸಾಯುತ್ತಾರೆ. ಅವರ ಜೀವವು ಅಪವಿ ತ್ರರ ಮಧ್ಯದಲ್ಲಿ ಇದೆ.
- 15 ಬಡವನನ್ನು ಆತನು ಕಷ್ಟದ ಸ್ಥಿತಿಯಿಂದ ತಪ್ಪಿಸುತ್ತಾನೆ. ಬಾಧೆಯಲ್ಲಿ ಅವರ ಕಿವಿ ಯನ್ನು ತೆರೆಯುತ್ತಾನೆ.
- 16 ನಿನ್ನನ್ನು ಆತನು ಹಾಗೆಯೇ ಇಕ್ಕಟ್ಟಿನೊಳಗಿಂದ ತೆಗೆದು ಇಕ್ಕಟ್ಟಿಲ್ಲದ ವಿಶಾಲವಾದ ಸ್ಥಳಕ್ಕೆ ಬರಮಾಡ ಬಹುದಾಗಿತ್ತು; ನಿನ್ನ ಮೇಜಿನ ಮೇಲೆ ಇಡತಕ್ಕವುಗಳು ಕೊಬ್ಬಿನಿಂದ ತುಂಬಿದವುಗಳಾಗಿರುವವು.
- 17 ಆದರೆ ನೀನು ದುಷ್ಟನ ನ್ಯಾಯವನ್ನು ಪೂರೈಸಿದಿ; ನ್ಯಾಯವೂ ತೀರ್ಪೂ ನಿನ್ನನ್ನು ಹಿಡಿಯುವವು.
- 18 ರೌದ್ರ ಉಂಟು, ಅವನು ನಿನ್ನನ್ನು ಒಂದೇ ಪೆಟ್ಟಿನಿಂದ ಒಯ್ಯದ ಹಾಗೆ ನೋಡು; ದೊಡ್ಡ ವಿಮೋಚನೆಯ ಕ್ರಯ ನಿನ್ನನ್ನು ಬಿಡಿಸದು.
- 19 ಅವನು ನಿನ್ನ ಐಶ್ವರ್ಯವನ್ನು ಲೆಕ್ಕಿಸು ವನೋ? ಬಂಗಾರವನ್ನೂ ಬಲದ ಎಲ್ಲಾ ಶಕ್ತಿಗಳನ್ನೂ ಲೆಕ್ಕಿಸನು.
- 20 ಜನಗಳು ತಮ್ಮ ಸ್ಥಳದಲ್ಲಿ ಒಡೆಯಲ್ಪಡುವ ರಾತ್ರಿಯನ್ನು ಬಯಸಬೇಡ.
- 21 ದುಷ್ಟತನಕ್ಕೆ ತಿರುಗದ ಹಾಗೆ ಎಚ್ಚರವಾಗಿರು. ಕಷ್ಟಕ್ಕಿಂತ ಇದನ್ನೇ ನೀನು ಆದುಕೊಂಡಿ.
- 22 ಇಗೋ, ದೇವರು ತನ್ನ ಶಕ್ತಿಯಲ್ಲಿ ಉನ್ನತನಾಗಿ ದ್ದಾನೆ; ಆತನ ಹಾಗೆ ಬೋಧಿಸುವವನು ಯಾರು?
- 23 ಆತನ ಮಾರ್ಗವನ್ನು ಆತನಿಗೆ ನೇಮಿಸಿದವನಾರು? ನೀನು ಕೆಟ್ಟದ್ದು ಮಾಡಿದಿ ಎಂದು ಹೇಳುವವನಾರು?
- 24 ಮನುಷ್ಯನು ನೋಡುವ ಆತನ ಕೃತ್ಯಗಳನ್ನು ಘನ ಪಡಿಸುವದಕ್ಕೆ ನೆನಸಿಕೋ.
- 25 ಎಲ್ಲಾ ಮನುಷ್ಯರು ಅದನ್ನು ನೋಡಬಹುದು, ಮನುಷ್ಯರು ದೂರದಿಂದ ದೃಷ್ಟಿಸುತ್ತಾರೆ.
- 26 ಇಗೋ, ದೇವರು ದೊಡ್ಡವನಾಗಿದ್ದಾನೆ. ನಾವು ಆತನನ್ನು ಅರಿಯದವರಾಗಿದ್ದೇವೆ. ಆತನ ವರುಷಗಳ ಲೆಕ್ಕಕ್ಕೆ ಶೋಧನೆ ಇಲ್ಲ.
- 27 ಆತನು ನೀರಿನ ಹನಿಗಳನ್ನು ಕೂಡಿಸಿದಾಗ, ಅದರ ಮಂಜಿನ ಪ್ರಕಾರ ಮಳೆಯನ್ನು ಸುರಿಸುತ್ತವೆ.
- 28 ಮೋಡಗಳು ಅದನ್ನು ಸುರಿಸಿ ಮನು ಷ್ಯನ ಮೇಲೆ ಸಮೃದ್ಧಿಯಾಗಿ ಸುರಿಯಮಾಡುತ್ತವೆ.
- 29 ಮೋಡದ ವಿಸ್ತೀರ್ಣತೆಯನ್ನೂ ಆತನ ಗುಡಾರದ ಶಬ್ಧವನ್ನೂ ತಿಳುಕೊಳ್ಳುವವನಾರು?
- 30 ಇಗೋ, ತನ್ನ ಸುತ್ತಲೂ ಬೆಳಕನ್ನು ವಿಸ್ತರಿಸಿ ಸಮುದ್ರದ ಅಗಾಧವನ್ನು ಮುಚ್ಚುತ್ತಾನೆ.
- 31 ಅವುಗಳಿಂದ ಜನಗಳಿಗೆ ಆತನು ನ್ಯಾಯ ತೀರಿಸುತ್ತಾನೆ; ಸಮೃದ್ಧಿಯಾಗಿ ಆತನು ಆಹಾರ ಕೊಡುತ್ತಾನೆ.
- 32 ಮೇಘಗಳಿಂದ ಬೆಳಕನ್ನು ಮುಚ್ಚು ತ್ತಾನೆ;
- 33 ಅದರ ಶಬ್ದವು ಅದರ ವಿಷಯ ತಿಳಿಸುತ್ತದೆ; ಅವುಗಳ ಮಧ್ಯದಲ್ಲಿ ಬರುವ ಮೋಡದಿಂದ ಪ್ರಕಾಶಿಸ ದಂತೆ ಅಪ್ಪಣೆಕೊಡುತ್ತಾನೆ. ಪಶುಗಳು ಸಹ ಮಂಜಿನ ವಿಷಯವಾಗಿ ತಿಳಿಸುತ್ತವೆ.
Job 36
- Details
- Parent Category: Old Testament
- Category: Job
ಯೋಬನು ಅಧ್ಯಾಯ 36