- 1 ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ--
- 2 ಆರೋನನಿಗೂ ಅವನ ಕುಮಾರರಿಗೂ ಇಸ್ರಾಯೇಲ್ ಮಕ್ಕಳಿಗೂ ಮಾತನಾಡಿ ಅವರಿಗೆ ಹೀಗೆ ಹೇಳು--ಕರ್ತನು ನಿಮಗೆ ಆಜ್ಞಾಪಿಸಿ ಹೇಳುವದೇನಂದರೆ,
- 3 ಇಸ್ರಾಯೇಲಿನ ಮನೆತನದಲ್ಲಿ ಯಾವನಾದರೂ ಒಂದು ಎತ್ತನ್ನಾಗಲಿ ಕುರಿಮರಿಯ ನ್ನಾಗಲಿ ಆಡನ್ನಾಗಲಿ ಪಾಳೆಯದೊಳಗಾಗಲಿ ಹೊರ ಗಾಗಲಿ ವಧಿಸಿ
- 4 ಕರ್ತನಿಗೆ ಸಮರ್ಪಿಸುವ ಬಲಿಯಾಗಿ ಕರ್ತನ ಸನ್ನಿಧಿಯಲ್ಲಿರುವ ಸಭೆಯ ಗುಡಾರದ ಬಾಗಿಲ ಬಳಿಗೆ ತಾರದಿದ್ದರೆ ಆ ಮನುಷ್ಯನ ಮೇಲೆ ರಕ್ತಾ ಪರಾಧವು ಹೊರಿಸಲ್ಪಡಬೇಕು; ಅವನು ರಕ್ತ ಸುರಿಸಿ ರುವನು; ಆ ಮನುಷ್ಯನು ತನ್ನ ಜನರ ಮಧ್ಯದೊ ಳಗಿಂದ ತೆಗೆದುಹಾಕಲ್ಪಡಬೇಕು.
- 5 ಇಸ್ರಾಯೇಲ್ ಮಕ್ಕಳು ತಾವು ಬಯಲಿನಲ್ಲಿ ಸಮರ್ಪಿಸುವ ಬಲಿಗಳನ್ನು ಕರ್ತನಿಗೆ ಸಭೆಯ ಗುಡಾರದ ಬಾಗಿಲಿನ ಬಳಿಯಲ್ಲಿ ಯಾಜಕನ ಬಳಿಗೆ ತಂದು ಕರ್ತನಿಗೆ ಸಮಾಧಾನದ ಬಲಿಯಾಗಿ ಸಮರ್ಪಿಸಬೇಕು.
- 6 ಯಾಜಕನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕರ್ತನ ಯಜ್ಞವೇದಿಯ ಮೇಲೆ ರಕ್ತವನ್ನು ಚಿಮುಕಿಸಬೇಕು. ಕೊಬ್ಬನ್ನು ಕರ್ತನಿಗೆ ಸುಗಂಧವಾಸನೆಯಾಗಿ ಸುಡಬೇಕು.
- 7 ಅವರು ಜಾರತ್ವ ಮಾಡುವಂತೆ ಯಾರ ಹಿಂದೆ ಹೋದರೋ ಆ ದೆವ್ವ ಗಳಿಗೆ ಇನ್ನೆಂದಿಗೂ ಅವರು ತಮ್ಮ ಯಜ್ಞಗಳನ್ನು ಸಮರ್ಪಿಸಬಾರದು. ಇದು ಅವರಿಗೆ ಅವರ ತಲ ತಲಾಂತರಗಳ ವರೆಗೆ ಶಾಶ್ವತವಾದ ನಿಯಮವಾಗಿ ರುವದು.
- 8 ಇದಲ್ಲದೆ ನೀನು ಅವರಿಗೆ ಹೇಳಬೇಕಾದದ್ದೇ ನಂದರೆ--ಇಸ್ರಾಯೇಲಿನ ಮನೆತನದವರಲ್ಲಿ ಯಾವ ಮನುಷ್ಯನಾದರೂ ನಿಮ್ಮೊಳಗೆ ಪ್ರವಾಸಿಯರಾಗಿದ್ದ ಪರಕೀಯರು ದಹನಬಲಿಯನ್ನಾಗಲಿ ಯಜ್ಞಸಮ ರ್ಪಣೆಯನ್ನಾಗಲಿ ಅರ್ಪಿಸಿದರೆ
- 9 ಅದನ್ನು ಕರ್ತನಿಗೆ ಸಮರ್ಪಿಸುವಂತೆ ಸಭೆಯ ಗುಡಾರದ ಬಾಗಿಲ ಬಳಿಗೆ ತಾರದಿದ್ದರೆ ಆ ಮನುಷ್ಯನು ತನ್ನ ಜನಗಳ ಮಧ್ಯ ದೊಳಗಿಂದ ತೆಗೆದುಹಾಕಲ್ಪಡಬೇಕು.
- 10 ಇದಲ್ಲದೆ ಇಸ್ರಾಯೇಲ್ ಮನೆತನದಲ್ಲಿ ಯಾವನಾದರೂ ನಿಮ್ಮ ಮಧ್ಯದೊಳಗೆ ಪ್ರವಾಸಿಯಾಗಿರುವ ಪರಕೀಯನಾ ದರೂ ಯಾವದೇ ತರದ ರಕ್ತವನ್ನು ತಿಂದರೆ ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
- 11 ಯಾಕಂದರೆ ಪ್ರತಿ ದೇಹಿಗೂ ರಕ್ತವೇ ಪ್ರಾಣಾಧಾರ. ಅಂಥ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮ ಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರ ವಾಗಿರುವ ಕಾರಣ ಅದರಿಂದ ದೋಷಪರಿಹಾರ ವಾಗುತ್ತದಷ್ಟೆ.
- 12 ಆದಕಾರಣ ನಿಮ್ಮಲ್ಲಿ ಯಾವನಾ ದರೂ ರಕ್ತವನ್ನು ತಿನ್ನಬಾರದೆಂದು ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿರುವ ಪರಕೀಯನು ರಕ್ತವನ್ನು ತಿನ್ನಬಾರ ದೆಂದು ನಾನು ಇಸ್ರಾಯೇಲ್ ಮಕ್ಕಳಿಗೆ ಹೇಳಿದೆನು.
- 13 ಇದಲ್ಲದೆ ಇಸ್ರಾಯೇಲ್ ಮಕ್ಕಳಲ್ಲಿ ಯಾವ ಮನುಷ್ಯನಾದರೂ ನಿಮ್ಮೊಳಗೆ ಪ್ರವಾಸಿಯಾಗಿರುವ ಪರಕೀಯನಾದರೂ ತಿನ್ನುವದಕ್ಕಾಗಿ ಬೇಟೆಯಾಡಿ ಯಾವದೇ ಪಶುವನ್ನಾಗಲಿ ಇಲ್ಲವೆ ಪಕ್ಷಿಯನ್ನಾಗಲಿ ಹಿಡಿದರೆ ಅದರ ರಕ್ತವನ್ನೆಲ್ಲಾ ಸುರಿದು ಅದನ್ನು ಮಣ್ಣಿ ನಿಂದ ಮುಚ್ಚಬೇಕು.
- 14 ಯಾಕಂದರೆ ರಕ್ತವೇ ಎಲ್ಲಾ ಶರೀರಗಳ ಜೀವವಾಗಿದೆ; ಅದಕ್ಕಿರುವ ರಕ್ತವು ಅದರ ಜೀವಕ್ಕಾಗಿಯೇ ಇದೆ; ಆದದರಿಂದ ನಾನು ಇಸ್ರಾ ಯೇಲ್ ಮಕ್ಕಳಿಗೆ--ನೀವು ಯಾವ ಬಗೆಯ ಶರೀರದ ರಕ್ತವನ್ನೂ ತಿನ್ನಬಾರದೆಂದು ಹೇಳಿದ್ದೇನೆ. ಎಲ್ಲಾ ಶರೀರಗಳ ಜೀವವು ರಕ್ತದಲ್ಲಿಯೇ ಇದೆ; ಇದನ್ನು ತಿನ್ನುವ ಯಾವನಾದರೂ ತೆಗೆದುಹಾಕಲ್ಪಡಬೇಕು.
- 15 ನಿಮ್ಮ ದೇಶದವನಾಗಲಿ ಪರಕೀಯನಾಗಲಿ ತನ್ನ ಷ್ಟಕ್ಕೆ ತಾನೇ ಸತ್ತುಹೋದದ್ದನ್ನು ಇಲ್ಲವೆ ಮೃಗಗಳಿಂದ ಹರಿಯಲ್ಪಟ್ಟಿರುವದನ್ನು ತಿನ್ನುವ ಪ್ರತಿಯೊಬ್ಬನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡ ಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರ ಬೇಕು, ತರುವಾಯ ಅವನು ಶುದ್ಧನಾಗಿರುವನು.
- 16 ಆದರೆ ಅವನು ಅವುಗಳನ್ನು ಒಗೆದುಕೊಳ್ಳದೆ ಇದ್ದರೆ ಇಲ್ಲವೆ ತಾನು ಸ್ನಾನಮಾಡದಿದ್ದರೆ ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳಬೇಕು.
Leviticus 17
- Details
- Parent Category: Old Testament
- Category: Leviticus
ಯಾಜಕಕಾಂಡ ಅಧ್ಯಾಯ 17