- 1 ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
- 2 ನೀನು ಇಸ್ರಾಯೇಲ್ ಮಕ್ಕಳೊಂದಿಗೆ ಮಾತನಾಡಿ ಹೀಗೆ ಹೇಳಬೇಕು--ನಿಮ್ಮ ದೇವರಾಗಿರುವ ಕರ್ತನು ನಾನೇ.
- 3 ನೀವು ವಾಸವಾಗಿದ್ದ ಐಗುಪ್ತದೇಶದ ಕೃತ್ಯಗಳಂತೆ ಮಾಡಬಾರದು; ನಾನು ನಿಮ್ಮನ್ನು ತರುವದಕ್ಕಿರುವ ಕಾನಾನ್ದೇಶದ ಕೃತ್ಯಗಳಂತೆ ನೀವು ಮಾಡಬಾರದು ಇಲ್ಲವೆ ನೀವು ಅವರ ನಿಯಮಗಳಿಗನುಸಾರವೂ ನಡೆ ಯಬಾರದು.
- 4 ನೀವು ನನ್ನ ನಿರ್ಣಯಗಳನ್ನು ಕೈಕೊಂಡು ಅವುಗಳಲ್ಲಿ ನಡೆಯುವ ಹಾಗೆ ನನ್ನ ಕಟ್ಟಳೆಗಳಂತೆ ನಡೆಯಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
- 5 ಆದದರಿಂದ ನೀವು ನನ್ನ ನಿಯಮಗಳನ್ನೂ ನಿರ್ಣಯಗಳನ್ನೂ ಕೈಕೊಳ್ಳಿರಿ. ಒಬ್ಬನು ಅವುಗಳನ್ನು ಮಾಡಿದರೆ ಅವನು ಅವುಗಳಲ್ಲಿ ಜೀವಿಸುವನು; ನಾನೇ ಕರ್ತನು.
- 6 ನಿಮ್ಮಲ್ಲಿ ಯಾವನಾದರೂ ತನ್ನ ಹತ್ತಿರ ಸಂಬಂಧಿಯ ಬೆತ್ತಲೆತನವನ್ನು ಬಯಲು ಮಾಡುವದಕ್ಕೆ ಅವಳ ಸವಿಾಪಕ್ಕೆ ಹೋಗಬಾರದು; ನಾನೇ ಕರ್ತನು.
- 7 ನಿನ್ನ ತಂದೆತಾಯಿಯ ಬೆತ್ತಲೆತನವನ್ನಾಗಲಿ ನೀನು ಕಾಣಿಸು ವಂತೆ ಮಾಡಬಾರದು; ಆಕೆಯು ನಿನ್ನ ತಾಯಿಯಾಗಿ ದ್ದಾಳೆ; ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
- 8 ನಿನ್ನ ತಂದೆಯ ಹೆಂಡತಿಯ ಬೆತ್ತಲೆ ತನವನ್ನು ನೀನು ಕಾಣುವಂತೆ ಮಾಡಬಾರದು; ಅದು ನಿನ್ನ ತಂದೆಯ ಬೆತ್ತಲೆತನ.
- 9 ನಿನ್ನ ಸಹೋದರಿಯ ಇಲ್ಲವೆ ನಿನ್ನ ತಂದೆಯ ಮಗಳ, ಅಂದರೆ ಅವಳು ಮನೆಯಲ್ಲಿ ಹುಟ್ಟಿದವಳಾಗಿರಲಿ ಹೊರಗೆ ಹುಟ್ಟಿದ ವಳಾಗಿರಲಿ ಅವರ ಬೆತ್ತಲೆತನವನ್ನು ಕಾಣುವಂತೆ ನೀನು ಮಾಡಬಾರದು.
- 10 ನಿನ್ನ ಮಗನ ಮಗಳ ಇಲ್ಲವೆ ನಿನ್ನ ಮಗಳ ಮಗಳ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು.
- 11 ಅವನ ಬೆತ್ತಲೆತನವು ನಿನ್ನ ಸ್ವಂತ ಬೆತ್ತಲೆತನವಾಗಿದೆ. ನಿನ್ನ ತಂದೆಗೆ ಹುಟ್ಟಿ ದಂಥ ನಿನ್ನ ತಂದೆಯ ಮಗಳು ನಿನಗೆ ಸಹೋದರಿ ಯಾಗಿರುವದರಿಂದ ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
- 12 ನಿನ್ನ ತಂದೆಯ ಸಹೋದರಿಯ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು; ಅವಳು ನಿನ್ನ ತಂದೆಗೆ ಹತ್ತಿರ ಸಂಬಂಧಿ ಯಾಗಿದ್ದಾಳೆ.
- 13 ನಿನ್ನ ತಾಯಿಯ ಸಹೋದರಿಯ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು; ಅವಳು ನಿನ್ನ ತಾಯಿಗೆ ಹತ್ತಿರದ ಸಂಬಂಧಿಯಾಗಿ ದ್ದಾಳೆ.
- 14 ನೀನು ನಿನ್ನ ತಂದೆಯ ಸಹೋದರನ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು. ನೀನು ಅವನ ಹೆಂಡತಿಯ ಬಳಿಗೆ ಹೋಗಬಾರದು; ಅವಳು ನಿನಗೆ ದೊಡ್ಡ ತಾಯಿ (ಚಿಕ್ಕತಾಯಿ).
- 15 ನಿನ್ನ ಸೊಸೆಯ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು; ಅವಳು ನಿನ್ನ ಮಗನ ಹೆಂಡತಿ; ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು.
- 16 ನೀನು ನಿನ್ನ ಸಹೋ ದರನ ಹೆಂಡತಿಯ ಬೆತ್ತಲೆತನವನ್ನು ಕಾಣುವಂತೆ ಮಾಡ ಬಾರದು; ಅದು ನಿನ್ನ ಸಹೋದರನ ಬೆತ್ತಲೆತನ.
- 17 ನೀನು ಒಬ್ಬ ಸ್ತ್ರೀಯ ಮತ್ತು ಅವಳ ಮಗಳ ಬೆತ್ತಲೆ ತನವನ್ನು ಕಾಣುವಂತೆ ಮಾಡಬಾರದು ಇಲ್ಲವೆ ಅವಳ ಮಗನ ಮಗಳ ಅಥವಾ ಮಗಳ ಮಗಳ ಬೆತ್ತಲೆತನ ವನ್ನು ಕಾಣುವಂತೆ ಮಾಡಬಾರದು. ಅವರು ಅವಳ ಹತ್ತಿರದ ಸಂಬಂಧಿಯಾಗಿದ್ದಾರೆ. ಅದು ದುಷ್ಟತನ ವಾಗಿದೆ.
- 18 ಇಲ್ಲವೆ ಅವಳಿಗೆ ವೈರಿಯಾಗುವ ಹಾಗೆ ಅವಳ ಸಹೋದರಿಯನ್ನು ಹೆಂಡತಿಯಾಗಿ ತೆಗೆದು ಕೊಳ್ಳಬೇಡ. ಒಬ್ಬಳು ಜೀವದಿಂದ ಇರುವಾಗ ಮತ್ತೊ ಬ್ಬಳ ಬೆತ್ತಲೆತನವನ್ನು ಕಾಣುವಂತೆ ಮಾಡಬೇಡ.
- 19 ಇದು ಮಾತ್ರವಲ್ಲದೆ ಒಬ್ಬಳು ತನ್ನ ಅಶುದ್ಧತ್ವದ ನಿಮಿತ್ತವಾಗಿ ಪ್ರತ್ಯೇಕಿಸಲ್ಪಟ್ಟಾಗ ನೀನು ಆ ಸ್ತ್ರೀಯ ಬೆತ್ತಲೆತನವನ್ನು ನೋಡುವಂತೆ ಅವಳ ಹತ್ತಿರ ಹೋಗ ಬೇಡ.
- 20 ಇದಲ್ಲದೆ ಅವಳಿಂದ ನಿನ್ನನ್ನು ಹೊಲೆಮಾಡಿ ಕೊಳ್ಳದಂತೆ ನಿನ್ನ ನೆರೆಯವನ ಹೆಂಡತಿಯೊಂದಿಗೆ ನೀನು ಸಂಗಮಿಸಬೇಡ.
- 21 ನಿನ್ನ ದೇವರ ಹೆಸರನ್ನು ಅಶುದ್ಧಪಡಿಸುವಂತೆ ನಿನ್ನ ಸಂತಾನವನ್ನು ಮೋಲೆಕನಿಗೆ ಬೆಂಕಿಯ ಮೂಲಕ ಅರ್ಪಿಸಬಾರದು; ನಾನೇ ಕರ್ತನು.
- 22 ಸ್ತ್ರೀಯೊಂದಿಗೆ ಮಲಗಿಕೊಳ್ಳುವಂತೆ ಪುರು ಷನೊಂದಿಗೆ ಮಲಗಬಾರದು; ಅದು ಅಸಹ್ಯವಾದದ್ದು.
- 23 ಇದಲ್ಲದೆ ಪಶುವಿನೊಂದಿಗೆ ನೀನು ಮಲಗಿ ನಿನ್ನನ್ನು ಹೊಲೆಮಾಡಿಕೊಳ್ಳಬಾರದು; ಯಾವ ಸ್ತ್ರೀಯೂ ಅದರಿಂದ ಸಂಗಮಿಸಿಕೊಳ್ಳುವದಕ್ಕೆ ಪಶುವಿನ ಮುಂದೆ ನಿಲ್ಲಬಾರದು; ಅದು ಗಲಿಬಿಲಿಯಾದದ್ದು.
- 24 ನೀವು ಈ ಯಾವ ವಿಷಯಗಳಲ್ಲಿಯೂ ನಿಮ್ಮನ್ನು ಹೊಲೆ ಮಾಡಿಕೊಳ್ಳಬಾರದು. ನಿಮ್ಮ ಮುಂದೆ ನಾನು ಹೊರಡಿಸಿಬಿಟ್ಟ ಜನಾಂಗಗಳು ಇವೆಲ್ಲವುಗಳಲ್ಲಿ ಹೊಲೆಯಾಗಿವೆ.
- 25 ದೇಶವೂ ಹೊಲೆಯಾಗಿದೆ. ಆದದರಿಂದ ಅದರ ಮೇಲಿರುವ ಅಕ್ರಮವನ್ನು ನಾನು ದಂಡಿಸುವೆನು, ಆಗ ದೇಶವು ತಾನೇ ತನ್ನೊಳಗಿನ ನಿವಾಸಿಗಳನ್ನು ಕಾರಿಬಿಡುವದು.
- 26 ಆದದರಿಂದ ನೀವು ನನ್ನ ನಿಯಮಗಳನ್ನು ನಿರ್ಣಯಗಳನ್ನು ಕೈಕೊಳ್ಳಬೇಕು. ನಿಮ್ಮ ದೇಶದವರಲ್ಲಿ ಯಾವನೇ ಆಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನಾದರೂ ಮಾಡ ಬಾರದು.
- 27 (ನಿಮ್ಮೆದುರಿನಲ್ಲಿದ್ದ ಆ ದೇಶದವರು ಈ ಎಲ್ಲ ಅಸಹ್ಯವಾದವುಗಳನ್ನು ಮಾಡಿದರು, ಮತ್ತು ದೇಶವೂ ಹೊಲೆಯಾಯಿತು;)
- 28 ನೀವೂ ಅದನ್ನು ಅಶುದ್ಧಮಾಡಿದರೆ ಅದು ನಿಮ್ಮ ಮುಂದಿದ್ದ ಜನಾಂಗಗಳವರನ್ನು ಕಾರಿದಂತೆ ನಿಮ್ಮನ್ನೂ ಕಾರುವದು.
- 29 ಯಾವನಾದರೂ ಈ ಅಸಹ್ಯವಾದವುಗಳಲ್ಲಿ ಯಾವ ದನ್ನಾದರೂ ಮಾಡಿದರೆ ಅವುಗಳನ್ನು ಮಾಡುವ ಮನುಷ್ಯರನ್ನು ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
- 30 ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
Leviticus 18
- Details
- Parent Category: Old Testament
- Category: Leviticus
ಯಾಜಕಕಾಂಡ ಅಧ್ಯಾಯ 18