- 1 ಜ್ಞಾನವು ಕೂಗುತ್ತದಲ್ಲವೋ? ಮತ್ತು ತಿಳುವಳಿಕೆಯು ತನ್ನ ಸ್ವರವನ್ನು ಕೇಳುವಂತೆ ಮಾಡುತ್ತದಲ್ಲವೋ?
- 2 ಉನ್ನತ ಸ್ಥಳಗಳ ತುದಿಯ ಲ್ಲಿಯೂ ಹಾದಿಗಳ ಸ್ಥಳಗಳಲ್ಲಿಯೂ ಮಾರ್ಗದ ಲ್ಲಿಯೂ ನಿಂತುಕೊಳ್ಳುತ್ತದೆ.
- 3 ದ್ವಾರಗಳ ಬಳಿಯ ಪಟ್ಟ ಣದ ಪ್ರವೇಶದಲ್ಲಿಯೂ ಒಳಗೆ ಬರುವ ಬಾಗಲು ಗಳಲ್ಲಿಯೂ ಆಕೆ ಕೂಗುವದೇನಂದರೆ--
- 4 ಓ ಮನು ಷ್ಯರೇ, ನಿಮ್ಮನ್ನೇ ನಾನು ಕರೆಯುತ್ತೇನೆ; ಮನುಷ್ಯ ಪುತ್ರರಿಗೆ ನನ್ನ ಸ್ವರವು ಇರುತ್ತದೆ.
- 5 ಓ ಜ್ಞಾನಹೀನರೇ, ಜ್ಞಾನವನ್ನು ಗ್ರಹಿಸಿರಿ; ಬುದ್ಧಿಹೀನರೇ, ನೀವು ತಿಳು ವಳಿಕೆಯ ಹೃದಯದವರಾಗಿರ್ರಿ.
- 6 ಕೇಳಿರಿ, ಉತ್ಕ್ರಷ್ಟ ವಾದ ಸಂಗತಿಗಳನ್ನು ನಾನು ಮಾತಾಡುವೆನು; ನ್ಯಾಯ ವಾದ ಸಂಗತಿಗಳಿಗಾಗಿ ನನ್ನ ತುಟಿಗಳನ್ನು ತೆರೆಯು ವೆನು.
- 7 ನನ್ನ ಬಾಯಿಯು ಸತ್ಯವನ್ನು ಮಾತಾಡುವದು; ನನ್ನ ತುಟಿಗಳಿಗೆ ಕೆಟ್ಟತನವು ಅಸಹ್ಯವಾಗಿದೆ.
- 8 ನನ್ನ ಬಾಯಿಯ ಮಾತುಗಳೆಲ್ಲಾ ನೀತಿಯಲ್ಲಿವೆ; ಮೂರ್ಖ ತನವಾಗಲಿ ವಕ್ರತೆಯಾಗಲಿ ಅವುಗಳಲ್ಲಿ ಇಲ್ಲ.
- 9 ಗ್ರಹಿ ಸುವವನಿಗೆ ಅವು ಸ್ಪಷ್ಟವಾಗಿಯೂ ತಿಳುವಳಿಕೆಯನ್ನು ಕಂಡುಕೊಳ್ಳುವವನಿಗೆ ಅವು ನ್ಯಾಯವಾಗಿಯೂ ಇವೆ.
- 10 ಬೆಳ್ಳಿಯನ್ನಲ್ಲ, ನನ್ನ ಶಿಕ್ಷಣವನ್ನೂ ಆಯಲ್ಪಟ್ಟ ಬಂಗಾ ರಕ್ಕಿಂತ ತಿಳುವಳಿಕೆಯನ್ನೂ ಪಡೆದುಕೋ.
- 11 ಮಾಣಿಕ್ಯ ಗಳಿಗಿಂತ ಜ್ಞಾನವು ಉತ್ತಮ, ಅಪೇಕ್ಷಿಸಲ್ಪಡತಕ್ಕ ಎಲ್ಲಾ ವಸ್ತುಗಳು ಅದಕ್ಕೆ ಹೋಲಿಸುವದಕ್ಕಾಗದು.
- 12 ಜ್ಞಾನ ವೆಂಬ ನಾನು ವಿವೇಕದೊಂದಿಗೆ ವಾಸವಾಗಿದ್ದೇನೆ. ಯುಕ್ತಿಯುಳ್ಳ ಕಲ್ಪನಾ ಶಕ್ತಿಯ ತಿಳುವಳಿಕೆಯನ್ನು ನಾನು ಕಂಡುಕೊಳ್ಳುತ್ತೇನೆ.
- 13 ಕರ್ತನ ಭಯವು ದುಷ್ಟತ್ವವನ್ನು ಹಗೆಮಾಡುವದು; ಗರ್ವ ಅಹಂಭಾವ ಕೆಟ್ಟದಾರಿ ಮೂರ್ಖನಬಾಯಿ ಇವುಗಳನ್ನು ನಾನು ಹಗೆಮಾಡು ತ್ತೇನೆ.
- 14 ಆಲೋಚನೆಯೂ ಸುಜ್ಞಾನವೂ ನನ್ನವು; ವಿವೇಕವು ನಾನೇ. ನನಗೆ ಸಾಮರ್ಥ್ಯವಿದೆ.
- 15 ನನ್ನ ಮೂಲಕ ರಾಜರು ಆಳುವರು. ಪ್ರಧಾನರು ತೀರ್ಪು ಕೊಡುವರು.
- 16 ನನ್ನಿಂದ ಅಧಿಪತಿಗಳೂ ಕೀರ್ತಿವಂತರೂ ಭೂಮಿಯ ಎಲ್ಲಾ ನ್ಯಾಯಾಧಿಪತಿಗಳೂ ಆಳುವರು.
- 17 ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ. ಶೀಘ್ರವಾಗಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು.
- 18 ಐಶ್ವರ್ಯವೂ ಘನತೆಯೂ ಹೌದು, ಶ್ರೇಷ್ಠ ಸಂಪತ್ತೂ ನೀತಿಯೂ ನನ್ನೊಂದಿಗಿವೆ.
- 19 ನನ್ನ ಫಲವು ಬಂಗಾರಕ್ಕಿಂತಲೂ ಹೌದು, ಚೊಕ್ಕ ಬಂಗಾರಕ್ಕಿಂತಲೂ ನನ್ನ ಆದಾಯವು ಆಯಲ್ಪಟ್ಟ ಬೆಳ್ಳಿಗಿಂತಲೂ ಶ್ರೇಷ್ಠವಾಗಿದೆ.
- 20 ನೀತಿಯ ಮಾರ್ಗದಲ್ಲಿ ನ್ಯಾಯದ ದಾರಿಗಳ ಮಧ್ಯದಲ್ಲಿ ನಾನು ನಡಿಸುತ್ತೇನೆ.
- 21 ನನ್ನನ್ನು ಪ್ರೀತಿಸುವವರು ಸಂಪತ್ತನ್ನು ಬಾಧ್ಯವಾಗಿ ಹೊಂದಿದಂತೆ ನಾನು ಅವರ ಬೊಕ್ಕಸ ಗಳನ್ನು ತುಂಬಿಸುವೆನು.
- 22 ತನ್ನ ಮಾರ್ಗದ ಹಾದಿಯಲ್ಲಿ ಆತನ ಪುರಾತನ ಕಾರ್ಯಗಳಿಗಿಂತ ಮೊದಲು ಕರ್ತನು ನನ್ನನ್ನು ಪಡೆದು ಕೊಂಡಿದ್ದನು.
- 23 ನಿತ್ಯತ್ವದಿಂದ ಇಲ್ಲವೆ ಆರಂಭದಿಂದ, ಭೂಮಿಯು ಇರುವದಕ್ಕೆ ಮುಂಚೆ ನಾನು ಸ್ಥಾಪಿಸಲ್ಪ ಟ್ಟೆನು.
- 24 ಅಗಾಧಗಳು ಇಲ್ಲದೆ ಇರುವಾಗ, ನೀರಿನಿಂದ ಸಮೃದ್ಧಿಯಾದ ಬುಗ್ಗೆಗಳು ಇಲ್ಲದೆ ಇರುವಾಗ ನಾನು ಉಂಟುಮಾಡಲ್ಪಟ್ಟೆನು.
- 25 ಬೆಟ್ಟಗುಡ್ಡಗಳು ಸ್ಥಾಪಿಸಲ್ಪ ಡುವದಕ್ಕಿಂತ ಮುಂಚೆ
- 26 ಭೂಮಿಯನ್ನೂ ಹೊಲ ಗಳನ್ನೂ ಲೋಕದ ಅತ್ಯಧಿಕ ಭಾಗದ ಧೂಳನ್ನೂ ಆತನು ಇನ್ನು ನಿರ್ಮಿಸದೆ ಇರುವಾಗಲೇ ನಾನು ಉಂಟು ಮಾಡಲ್ಪಟ್ಟೆನು.
- 27 ಆತನು ಆಕಾಶಗಳನ್ನು ಸಿದ್ಧಪಡಿಸಿದಾಗ ಅಗಾಧದ ಮೇಲೆ ಚಕ್ರವನ್ನು ಹಾಕಿ ದಾಗ
- 28 ಮೇಲೆ ಮೇಘಗಳನ್ನು ಆತನು ಸ್ಥಾಪಿಸಿದಾಗ ಅಗಾಧದ ಬುಗ್ಗೆಗಳನ್ನು ಆತನು ಬಲಪಡಿಸಿದಾಗ
- 29 ಪ್ರವಾಹಗಳು ತನ್ನ ಆಜ್ಞೆಯನ್ನು ವಿಾರದಂತೆ ಸಮು ದ್ರಕ್ಕೆ ಆತನು ನಿಯಮವನ್ನು ಕೊಟ್ಟಿದಾಗ ಭೂಮಿಯ ಅಸ್ತಿವಾರಗಳನ್ನು ಆತನು ನೇಮಿಸಿದಾಗ ನಾನು ಆತ ನೊಂದಿಗೆ ಇದ್ದೆನು.
- 30 ಆಗ ಆತನೊಂದಿಗೆ ಬೆಳೆದ ವನಂತೆ ಆತನ ಹತ್ತಿರ ಇದ್ದೆನು; ದಿನಾಲು ನಾನು ಆತನ ಆನಂದವಾಗಿ ಆತನ ಮುಂದೆ ಯಾವಾಗಲೂ ಸಂತೋಷಿಸುತ್ತಿದ್ದೆನು.
- 31 ಆತನ ಭೂಮಿಯ ವಾಸ ಸ್ಥಳದ ಭಾಗದಲ್ಲಿ ಸಂತೋಷಿಸುತ್ತಿದ್ದೆನು. ಮನುಷ್ಯರ ಕುಮಾರರೊಂದಿಗೆ ನನ್ನ ಆನಂದವಿದ್ದಿತು.
- 32 ಆದದರಿಂದ ಓ ಮಕ್ಕಳೇ, ಈಗ ನನ್ನ ಕಡೆಗೆ ಕಿವಿಗೊಡಿರಿ; ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರು.
- 33 ಶಿಕ್ಷಣವನ್ನು ಕೇಳಿ ಅದನ್ನು ತಿರಸ್ಕರಿಸದೇ ಜ್ಞಾನವಂತರಾಗಿರ್ರಿ.
- 34 ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನ ಕಾಯುತ್ತಾ ನನ್ನ ಬಾಗಲುಗಳ ನಿಲುವು ಗಳಲ್ಲಿ ನಿರೀಕ್ಷಿಸುತ್ತಾ ನನ್ನ ಮಾತುಗಳನ್ನು ಕೇಳುವವನು ಧನ್ಯನು.
- 35 ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಂಡು ಕರ್ತನ ದಯವನ್ನು ಹೊಂದುವನು.
- 36 ಆದರೆ ನನಗೆ ವಿರೋಧವಾಗಿ ಪಾಪಮಾಡುವವನು ತನ್ನ ಸ್ವಂತ ಪ್ರಾಣಕ್ಕೆ ಕೇಡುಮಾಡಿಕೊಳ್ಳುತ್ತಾನೆ. ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.
Proverbs 08
- Details
- Parent Category: Old Testament
- Category: Proverbs
ಙ್ಞಾನೋಕ್ತಿಗಳು ಅಧ್ಯಾಯ 8