wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಙ್ಞಾನೋಕ್ತಿಗಳುಅಧ್ಯಾಯ 9
  • 1 ಜ್ಞಾನವೆಂಬಾಕೆಯು ತನ್ನ ಮನೆಯನ್ನು ಕಟ್ಟಿ ಕೊಂಡಿದ್ದಾಳೆ; ಆಕೆಯು ತನ್ನ ಏಳು ಕಂಬ ಗಳನ್ನು ಕೆತ್ತಿಸಿದ್ದಾಳೆ.
  • 2 ಆಕೆಯು ತನ್ನ ಪಶುಗಳನ್ನು ವಧಿಸಿ, ತನ್ನ ದ್ರಾಕ್ಷಾರಸವನ್ನು ಬೆರಸಿ, ತನ್ನ ಮೇಜನ್ನು ಸಹ ಸಿದ್ಧಪಡಿಸಿದಳು.
  • 3 ಆಕೆಯು ತನ್ನ ಕನ್ನಿಕೆಯರನ್ನು ಕಳುಹಿಸುತ್ತಾಳೆ. ಆಕೆಯು ಪಟ್ಟಣದ ಅತಿ ಉನ್ನತ ಸ್ಥಳಗಳಲ್ಲಿ--
  • 4 ಮೂರ್ಖನು ಯಾವನೋ ಅವನು ಇಲ್ಲಿಗೆ ತಿರುಗಲಿ ಎಂದು ಕೂಗುತ್ತಾಳೆ. ತಿಳುವಳಿಕೆ ಇಲ್ಲದೆ ಇರುವವನಿಗೆ ಆಕೆಯು--
  • 5 ಬಾ, ನನ್ನ ರೊಟ್ಟಿಯನ್ನು ತಿಂದು ನಾನು ಬೆರಸಿದ ದ್ರಾಕ್ಷಾ ರಸವನ್ನು ಕುಡಿ ಎಂದೂ
  • 6 ಮೂಢರನ್ನು ಬಿಟ್ಟು ಬಾಳು ಮತ್ತು ವಿವೇಕದ ಮಾರ್ಗದಲ್ಲಿ ಹೋಗು ಎಂದೂ ಕೂಗುತ್ತಾಳೆ.
  • 7 ಪರಿಹಾಸ್ಯಮಾಡುವವನನ್ನು ಗದರಿಸುವವನು ತನಗೆ ತಾನೇ ಅವಮಾನಕ್ಕೆ ಗುರಿಮಾಡಿಕೊಳ್ಳುವನು; ದುಷ್ಟನನ್ನು ಗದರಿಸುವವನು ತನಗೆ ತಾನೇ ಕಳಂಕವನ್ನು ತಂದುಕೊಳ್ಳುವನು.
  • 8 ಪರಿಹಾಸ್ಯಮಾಡುವವನು ನಿನ್ನನ್ನು ಹಗೆಮಾಡದಂತೆ ಅವನನ್ನು ಗದರಿಸಬೇಡ. ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿ ಮಾಡುವನು.
  • 9 ಜ್ಞಾನಿಗೆ ಶಿಕ್ಷಣ ಮಾಡಿದರೆ ಅವನು ಇನ್ನೂ ಹೆಚ್ಚಾಗಿ ಜ್ಞಾನವಂತನಾಗಿರುವನು; ನೀತಿವಂತ ನಿಗೆ ಬೋಧಿಸಿದರೆ ಅವನು ಜ್ಞಾನವನ್ನು ಹೆಚ್ಚಿಸಿ ಕೊಳ್ಳುವನು. ಕರ್ತನ ಭಯವೇ ಜ್ಞಾನಕ್ಕೆ ಮೂಲವು.
  • 10 ಪರಿಶುದ್ಧರ ತಿಳುವಳಿಕೆಯೇ ವಿವೇಕವು.
  • 11 ನನ್ನ ಮೂಲಕ ನಿನ್ನ ದಿನಗಳು ಹೆಚ್ಚುವವು; ನಿನ್ನ ಜೀವನದ ವರುಷಗಳು ವೃದ್ಧಿಯಾಗುವವು.
  • 12 ನೀನು ಜ್ಞಾನಿಯಾ ಗಿದ್ದರೆ ನಿನ್ನಷ್ಟಕ್ಕೆ ನೀನೇ ಜ್ಞಾನಿಯಾಗಿರುವಿ; ನೀನು ನಿಂದಿಸುವವನಾದರೆ ನೀನೇ ಅದನ್ನು ಅನುಭವಿಸುವಿ.
  • 13 ಬುದ್ಧಿಹೀನಳಾದ ಸ್ತ್ರೀಯು ಕೂಗಾಟದವಳು. ಅವಳು ಅಜ್ಞಾನಿ; ಏನೂ ತಿಳಿಯದವಳು.
  • 14 ತನ್ನ ಮನೆಯ ಬಾಗಲಿನಲ್ಲಿ ಪಟ್ಟಣದ ಎತ್ತರವಾದ ಸ್ಥಳಗಳ ಪೀಠದ ಮೇಲೆ ಕೂತುಕೊಂಡಿರುತ್ತಾಳೆ.
  • 15 ಮಾರ್ಗಕ್ಕನುಸಾರವಾಗಿ ಹೋಗುವ ಪ್ರಯಾಣಿಕ ರನ್ನು ಕರೆಯುತ್ತಾಳೆ.
  • 16 ಯಾವನು ಮೂಢನೋ ಅವನು ಇಲ್ಲಿಗೆ ತಿರುಗಲಿ; ವಿವೇಕವಿಲ್ಲದವನಿಗೆ ಆಕೆಯು--
  • 17 ಕದಿಯಲ್ಪಟ್ಟ ನೀರುಗಳು ಸಿಹಿಯಾಗಿವೆ ರಹಸ್ಯ ದಲ್ಲಿ ತಿನ್ನುವ ರೊಟ್ಟಿಯು ರುಚಿಯಾಗಿದೆ ಎಂದು ಹೇಳುತ್ತಾಳೆ.
  • 18 ಆದರೆ ಸತ್ತವರು ಅಲ್ಲಿದ್ದಾರೆಂದೂ ಪಾತಾಳದ ಅಗಾಧಗಳಲ್ಲಿ ಅವಳ ಅಥಿತಿಗಳು ಇದ್ದಾ ರೆಂದೂ ಅವನಿಗೆ ತಿಳಿಯದು.