wheel

AJC Publications and Media Portal

 

But the Comforter, which is the Holy Ghost, whom the Father will send in my name, he shall teach you all things,
and bring all things to your remembrance, whatsoever I have said unto you. John 14:26


ಕೀರ್ತನೆಗಳುಅಧ್ಯಾಯ 65
  • 1 ದೇವರೇ, ಚೀಯೋನಿನಲ್ಲಿ ನಿನಗೋಸ್ಕರ ಸ್ತೋತ್ರವು ಕಾದಿದೆ. ನಿನಗೆ ಅಲ್ಲಿ ಪ್ರಮಾ ಣವು ಸಲ್ಲಿಸಲ್ಪಡುವದು.
  • 2 ಪ್ರಾರ್ಥನೆಯನ್ನು ಕೇಳು ವಾತನೇ, ನಿನ್ನ ಬಳಿಗೆ ಎಲ್ಲಾ ಜನರು ಬರುವರು.
  • 3 ಅಕ್ರಮಗಳು ನನಗೆ ವಿರೋಧವಾಗಿ ಬಲಗೊಂಡಿವೆ; ನಮ್ಮ ದ್ರೋಹಗಳನ್ನಾದರೋ ನೀನು ತೊಳೆದು ಬಿಡುವಿ.
  • 4 ನೀನು ಆದುಕೊಂಡು ನಿನ್ನ ಬಳಿಗೆ ಬರ ಮಾಡಿಕೊಳ್ಳುವವನು ಧನ್ಯನು; ನಿನ್ನ ಅಂಗಳಗಳಲ್ಲಿ ಅವನು ವಾಸವಾಗಿರುವನು. ನಿನ್ನ ಪರಿಶುದ್ಧ ಮಂದಿರ ವಾದ ನಿನ್ನ ಆಲಯದ ಒಳ್ಳೇದರಿಂದ ನಾವು ತೃಪ್ತರಾಗುವೆವು.
  • 5 ನಮ್ಮ ರಕ್ಷಣೆಯ ಓ ದೇವರೇ, ಭಯಂಕರವಾದ ವುಗಳಿಂದ ನೀತಿಯಲ್ಲಿ ನೀನು ನಮಗೆ ಉತ್ತರ ಕೊಡುವಿ; ಭೂಮಿಯ ಎಲ್ಲಾ ಅಂತ್ಯಗಳಿಗೂ ಸಮುದ್ರ ದಲ್ಲಿ ದೂರವಾದವರಿಗೂ ನೀನು ಭರವಸವಾಗಿದ್ದೀ.
  • 6 ಬೆಟ್ಟಗಳನ್ನು ತನ್ನ ಶಕ್ತಿಯಿಂದ ನಿಲ್ಲಿಸುವಾತನೇ, ಪರಾಕ್ರಮದಿಂದ ನಡುಕಟ್ಟಿಕೊಂಡಾತನೇ,
  • 7 ಸಮುದ್ರ ಗಳ ಘೋಷವನ್ನೂ ಅವುಗಳ ತೆರೆಗಳ ಘೋಷವನ್ನೂ ಪ್ರಜೆಗಳ ಕೋಲಾಹಲವನ್ನೂ ಅಣಗಿಸುವಾತನೇ,
  • 8 ಭೂಮಿಯ ಕಟ್ಟಕಡೆಗಳಲ್ಲಿ ವಾಸಿಸುವವರು ಸಹ ನಿನ್ನ ಗುರುತುಗಳಿಗೆ ಭಯಪಡುವರು. ಉದಯಾಸ್ತ ಮಾನ ಸಮಯಗಳನ್ನು ಉತ್ಸಾಹಧ್ವನಿಗೈಯುವಂತೆ ನೀನು ಮಾಡುತ್ತೀ.
  • 9 ನೀನು ಭೂಮಿಯನ್ನು ಕಟಾಕ್ಷಿಸಿ ಅದನ್ನು ತೋಯಿಸಿ ನೀರಿನಿಂದ ತುಂಬಿರುವಂತೆ ದೇವರ ನದಿ ಯಿಂದ ಅದನ್ನು ಚೆನ್ನಾಗಿ ಹದಗೊಳಿಸುತ್ತೀ; ಹೀಗೆ ಭೂಮಿಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತೀ.
  • 10 ಉಳುವೆಯ ಸಾಲುಗಳನ್ನು ಸಮೃದ್ಧಿ ಯಾಗಿ ತ್ಯಾವಿಸುತ್ತೀ; ನೇಗಿಲ ಸಾಲುಗಳನ್ನು ಸಮಮಾಡುತ್ತೀ; ಸುರಿಯುವ ಮಳೆಯಿಂದ ಅದನ್ನು ಮೃದು ಮಾಡುತ್ತೀ; ಅದರ ಮೊಳಿಕೆಯನ್ನು ಆಶೀರ್ವದಿಸುತ್ತೀ.
  • 11 ವರುಷಕ್ಕೆ ನಿನ್ನ ಸುಭಿಕ್ಷಕಿರೀಟ ಇಡುತ್ತೀ; ನಿನ್ನ ಮಾರ್ಗಗಳಲ್ಲಿ ಸಮೃದ್ಧಿಯನ್ನು ಸುರಿಸುತ್ತೀ.
  • 12 ಅರ ಣ್ಯದ ಹುಲ್ಲುಗಾವಲುಗಳ ಮೇಲೂ ಸುರಿಯ ಮಾಡುತ್ತೀ; ಚಿಕ್ಕಗುಡ್ಡಗಳು ಎಲ್ಲಾ ಕಡೆಗಳಲ್ಲೂ ಉಲ್ಲಾ ಸಿಸುತ್ತವೆ.
  • 13 ಹುಲ್ಲುಗಾವಲುಗಳು ಮಂದೆಗಳನ್ನು ಹೊದ್ದುಕೊಳ್ಳುತ್ತವೆ; ಕಣಿವೆಗಳೂ ಧಾನ್ಯದಿಂದ ಮುಚ್ಚಿ ರುತ್ತವೆ, ಉತ್ಸಾಹಪಡುತ್ತವೆ ಮತ್ತು ಹಾಡುತ್ತವೆ.