- 1 ಸಮಸ್ತ ದೇಶಗಳೇ, ದೇವರಿಗೆ ಉತ್ಸಾಹ ಧ್ವನಿಗೈಯಿರಿ;
- 2 ಆತನ ಹೆಸರಿನ ಘನವನ್ನು ಕೀರ್ತಿಸಿರಿ; ಆತನ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ.
- 3 ದೇವರಿಗೆ--ನಿನ್ನ ಕೆಲಸಗಳಿಂದ ನೀನು ಎಷ್ಟು ಭಯಂಕರನಾಗಿದ್ದೀ ಎಂದು ಹೇಳಿರಿ. ನಿನ್ನ ಮಹಾಬಲದ ನಿಮಿತ್ತ ನಿನ್ನ ಶತ್ರುಗಳು ತಾವೇ ನಿನಗೆ ಅಧೀನರಾಗುವರು;
- 4 ಭೂನಿವಾಸಿಗಳೆಲ್ಲ ನಿನ್ನನ್ನು ಹಾಡಿ ಆರಾಧಿಸಿ ನಿನ್ನ ನಾಮವನ್ನು ಕೀರ್ತಿಸುವರು. ಸೆಲಾ.
- 5 ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ; ಮನುಷ್ಯರ ಮಕ್ಕಳ ಕಡೆಗೆ ಆತನು ತನ್ನ ಕಾರ್ಯಗಳಲ್ಲಿ ಭಯಂಕರನಾಗಿದ್ದಾನೆ.
- 6 ಆತನು ಸಮುದ್ರವನ್ನು ಒಣ ಗಿದ ಭೂಮಿಗೆ ತಿರುಗಿಸಿದನು; ಅವರು ಕಾಲು ನಡಿಗೆ ಯಾಗಿ ಪ್ರವಾಹವನ್ನು ದಾಟಿದರು; ಅಲ್ಲಿ ನಾವು ಆತನಲ್ಲಿ ಸಂತೋಷಿಸಿದೆವು.
- 7 ಆತನು ತನ್ನ ಪರಾಕ್ರಮ ದಿಂದ ಎಂದೆಂದಿಗೂ ಆಳುವವನಾಗಿದ್ದಾನೆ; ಆತನ ಕಣ್ಣುಗಳು ಜನಾಂಗಗಳನ್ನು ದೃಷ್ಟಿಸುತ್ತವೆ; ಎದುರು ಬೀಳುವವರು ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳದೆ ಇರಲಿ. ಸೆಲಾ.
- 8 ಓ ಜನರೇ, ನೀವು ದೇವರನ್ನು ಸ್ತುತಿಸಿರಿ; ಆತನ ಸ್ತೊತ್ರದ ಸ್ವರವು ಕೇಳಲ್ಪಡುವಂತೆ ಮಾಡಿರಿ.
- 9 ಆತನು ನಮ್ಮ ಪ್ರಾಣವನ್ನು ಜೀವದಲ್ಲಿಟ್ಟು ನಮ್ಮ ಪಾದಗಳನ್ನು ಕದಲುವಂತೆ ಬಿಡಲಿಲ್ಲ.
- 10 ಓ ದೇವರೇ, ನೀನು ನಮ್ಮನ್ನು ಶೋಧಿಸಿದ್ದೀ. ಬೆಳ್ಳಿಯನ್ನು ಪುಟಕ್ಕೆ ಹಾಕುವ ಪ್ರಕಾರ ನಮ್ಮನ್ನು ಶೋಧಿಸಿದ್ದೀ.
- 11 ನೀನು ಬಲೆಯೊಳಗೆ ನಮ್ಮನ್ನು ಬರಮಾಡಿದ್ದಲ್ಲದೆ ನಮ್ಮ ಸೊಂಟಗಳ ಮೇಲೆ ವ್ಯಥೆಯನ್ನು ಹೊರಿಸಿದ್ದೀ;
- 12 ಮನುಷ್ಯರು ನಮ್ಮ ತಲೆಗಳ ಮೇಲೆ ಸವಾರಿ ಮಾಡುವಂತೆ ಮಾಡಿದ್ದೀ. ನಾವು ಬೆಂಕಿಯಲ್ಲಿಯೂ ನೀರಿನಲ್ಲಿಯೂ ದಾಟಿದೆವು; ಆದರೆ ನೀನು ನಮ್ಮನ್ನು ಐಶ್ವರ್ಯದ ಸ್ಥಳಕ್ಕೆ ಬರಮಾಡಿದ್ದೀ;
- 13 ನಾನು ದಹನ ಬಲಿಗಳೊಂದಿಗೆ ನಿನ್ನ ಆಲಯಕ್ಕೆ ಹೋಗುವೆನು.
- 14 ನನ್ನ ಇಕ್ಕಟ್ಟಿನಲ್ಲಿ ತುಟಿಗಳು ಉಚ್ಚರಿಸಿದಂಥ, ಬಾಯಿ ನುಡಿದಂಥ, ಹರಕೆಗಳನ್ನು ನಾನು ನಿನಗೆ ಸಲ್ಲಿಸುವೆನು.
- 15 ಕೊಬ್ಬಿದ ದಹನಬಲಿಗಳನ್ನು ಟಗರುಗಳ ಧೂಪದ ಸಂಗಡ ನಿನಗೆ ಅರ್ಪಿಸುವೆನು; ಹೋತಗಳ ಸಂಗಡ ಎತ್ತುಗಳನ್ನು ಅರ್ಪಿಸುವೆನು. ಸೆಲಾ.
- 16 ದೇವರಿಗೆ ಭಯಪಡುವವರೆಲ್ಲರೇ, ಬನ್ನಿರಿ, ಕೇಳಿರಿ; ಆತನು ನನ್ನ ಪ್ರಾಣಕ್ಕೆ ಮಾಡಿದ್ದನ್ನು ಪ್ರಕಟಿ ಸುವೆನು.
- 17 ನನ್ನ ಬಾಯಿಂದ ಆತನನ್ನು ಕೂಗಿದೆನು; ನನ್ನ ನಾಲಿಗೆಯಿಂದ ಆತನನ್ನು ಉನ್ನತಪಡಿಸಿದೆನು.
- 18 ನನ್ನ ಹೃದಯದಲ್ಲಿ ಅಪರಾಧವನ್ನು ನಾನು ಆಶಿಸಿದ್ದರೆ ಕರ್ತನು ನನ್ನ ಪ್ರಾರ್ಥನೆಯನ್ನು ಕೇಳುವದಿಲ್ಲ.
- 19 ಆದರೆ ನಿಜವಾಗಿ ನನ್ನ ಪ್ರಾರ್ಥನೆಯನ್ನು ದೇವರು ಕೇಳಿದ್ದಾನಲ್ಲಾ! ಆತನು ನನ್ನ ಪ್ರಾರ್ಥನೆಯ ಸ್ವರವನ್ನು ಆಲೈಸಿದ್ದಾನಲ್ಲಾ!
- 20 ನನ್ನ ಪ್ರಾರ್ಥನೆಯನ್ನೂ ನನ್ನ ಬಳಿಯಿಂದ ತನ್ನ ಕರುಣೆಯನ್ನೂ ತೊಲಗಿಸದೆ ಇರುವ ದೇವರಿಗೆ ಸ್ತೋತ್ರವಾಗಲಿ.
Psalms 066
- Details
- Parent Category: Old Testament
- Category: Psalms
ಕೀರ್ತನೆಗಳು ಅಧ್ಯಾಯ 66